ಆರೋಗ್ಯಕರ ಜೀವನಶೈಲಿ ನಡೆಸಬೇಕೆಂದರೆ ಪ್ರೋಟೀನ್, ನ್ಯೂಟ್ರಿಷಿಯನ್ ಜೊತೆಗೆ ಫೈಬರ್ ಯುಕ್ತ ಆಹಾರ ಸೇವನೆ ಕೂಡ ಅತೀ ಮುಖ್ಯವಾಗುತ್ತದೆ
ಪೌಷ್ಠಿಕಾಂಶದ ಕುರಿತಾ ಯಾರೇ ಮಾತನಾಡಿದರು ಪ್ರೋಟೀನ್ ಮತ್ತು ನ್ಯೂಟ್ರಿಷಿಯನ್ ಕುರಿತು ಹೆಚ್ಚಾಗಿ ಮಾತನಾಡುತ್ತಾರೆ. ಆದರೆ, ಫೈಬರ್ ಎಂಬ ಅಂಶವನ್ನು ಮರೆತೇ ಹೋಗುತ್ತಾರೆ.
ಆರೋಗ್ಯಕರ ಜೀವನಶೈಲಿ ನಡೆಸಬೇಕೆಂದರೆ ಪ್ರೋಟೀನ್, ನ್ಯೂಟ್ರಿಷಿಯನ್ ಜೊತೆಗೆ ಫೈಬರ್ ಯುಕ್ತ ಆಹಾರ ಸೇವನೆ ಕೂಡ ಅತೀ ಮುಖ್ಯವಾಗುತ್ತದೆ. ಆಹಾರದಲ್ಲಿ ನಾರಿನಾಂಶ ಸೇರ್ಪಡೆ ಮಾಡಿದರೆ ಅದು ಜೀರ್ಣಕ್ರಿಯೆಯನ್ನು ಬೆಂಬಲಿಸುವುದರಿಂದ ಹಿಡಿದು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವವರೆಗೆ ದೀರ್ಘಕಾಲೀನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅತ್ಯಂತ ಶಕ್ತಿಶಾಲಿ ಪಾತ್ರ ನಿರ್ವಹಿಸುತ್ತದೆ.
ಸಸ್ಯಮೂಲ ಆಹಾರ ಉತ್ಪನ್ನಗಳ ಜೀರ್ಣವಾಗದ ಭಾಗವೇ ನಾರು. ಆಹಾರದಲ್ಲಿ 3 ಬಗೆಯ ನಾರಿನಾಂಶವಿರುತ್ತದೆ: ಕರಗಬಲ್ಲ ನಾರಿನಾಂಶ, ಕರಗದ ನಾರಿನಾಂಶ ಹಾಗೂ ಜೀರ್ಣವಾಗದ ಪಿಷ್ಟದ ಅಂಶ.
ಕರಗಬಲ್ಲ ನಾರಿನಾಂಶವು ಆಹಾರವು ಜಠರದಿಂದ ಕರುಳುಗಳಿಗೆ ತಲುಪುವ ವೇಗವನ್ನು ನಿಧಾನಿಸುತ್ತದೆ. ಇದರಿಂದ ಹೊಟ್ಟೆ ತುಂಬಿದಂತಹ ಭಾವ ಉಂಟಾಗುವುದರಿಂದ ಬಹಳ ಹೊತ್ತಿನವರೆಗೆ ಹಸಿವಿನ ಅನುಭವವಾಗುವುದಿಲ್ಲ. ಅಲ್ಲದೆ, ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವಲ್ಲಿ ಮತ್ತು ರಕ್ತದ ಸಕ್ಕರೆ ಅಂಶ ಸ್ಥಿರಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ನಾರಿನಾಂಶ ನಮ್ಮ ದೇಹಕ್ಕೆ ಅತ್ಯಗತ್ಯವೇಕೆ?
- ಕರುಳಿನ ನಿಯಮಿತ ಚಲನೆಗೆ ನೆರವಾಗುತ್ತದೆ
- ಮಲಬದ್ಧತೆ ಮತ್ತು ಮೂಲವ್ಯಾಧಿ ನಿಯಂತ್ರಿಸುತ್ತದೆ
- ತೂಕ ಇಳಿಸಲು ನೆರವಾಗುತ್ತದೆ
- ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
- ದೊಡ್ಡ ಕರುಳಿನ ಕ್ಯಾನ್ಸರ್ ಸಂಭವ ಕಡಿಮೆ ಮಾಡುತ್ತದೆ
- ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ನಿಯಂತ್ರಿಸಲು ಸಹಕರಿಸುತ್ತದೆ
- ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟ ಸಮತೋಲನಗೊಳಿಸುತ್ತದೆ
ನಾರಿನಾಂಶ ಕಡಿಮೆ ತಿಂದರೆ ಏನಾಗುತ್ತದೆ?
ಕಡಿಮೆ ನಾರಿನಾಂಶ ಸೇವನೆಯಿಂದ ಅನಿಯಮಿತ ಜೀರ್ಣಕ್ರಿಯೆ ಮತ್ತು ಮಧುಮೇಹ ಸಮಸ್ಯೆ ಉಂಟಾಗುತ್ತದೆ. ಕಾಲಾನಂತರದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್, ಕೊಬ್ಬಿನ ಪಿತ್ತಜನಕಾಂಗ ಮತ್ತು ಕೊಲೊನ್ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.
ನಮ್ಮ ಆಹಾರದಲ್ಲಿ ನಾರಿನಾಂಶ ಸೇರಿಸುವುದು ಹೇಗೆ?
ವಯಸ್ಕರಿಗೆ ಪ್ರತಿದಿನ ಸುಮಾರು 25-30 ಗ್ರಾಂ ಫೈಬರ್ ಅಗತ್ಯವಿರುತ್ತದೆ.

Comments
Leave a Comment